Tuesday, 14 May 2013

ಧನ್ಯವಾದಗಳು...


ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಪೂರ್ಣ ವಿವರ


೬೨- ಗಂಗಾವತಿ ವಿಧಾನಸಭಾ ಕ್ಷೇತ್ರ

ಕ್ರಮ ಸಂಖ್ಯೆ ಅಭ್ಯರ್ಥಿ ಹೆಸರು                          ಪಕ್ಷ                ಪಡೆದ ಮತಗಳು ಫಲಿತಾಂಶ
೦೧ ಇಕ್ಬಾಲ್ ಅನ್ಸಾರಿ                                  ಜೆ.ಡಿ.ಎಸ್.       ೬೦೨೫೯             ಆಯ್ಕೆ 
೦೨ ಪರಣ್ಣ ಮುನವಳ್ಳಿ                                     ಬಿ.ಜೆ.ಪಿ.          ೩೦೪೭೭
೦೩ ಎಚ್.ಆರ್. ಶ್ರೀನಾಥ                                 ಕಾಂಗ್ರೇಸ್        ೨೦೨೩೧
೦೪ ಹುಲುಗಪ್ಪ ದೇವರಮನಿ                            ಬಿ.ಎಸ್.ಪಿ.        ೭೪೯
೦೫ ಪಂಪನಗೌಡ್ರು ಪೋಲೀಸ್ ಪಾಟೀಲ್           ಬಿ.ಎಸ್.ಆರ್.    ೩೦೧೨
೦೬ ಬಸವರಾಜ ಪಾಟೀಲ್ ಅನ್ವರಿ                     ಕೆ.ಜೆ.ಪಿ.           ೭೦೫೬
೦೭ ಭಾರಧ್ವಜ ಸುಬ್ಬರಾವ್                              ಸಿಪಿಐ (ಎಂಎಲ್) ಲಿಬರೇಷನ್ ೯೬೯
೦೮ ಕೆ. ವಿಜಯಕುಮಾರ್                                ಪಿಪಿಐ (ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ) ೮೪೧
೦೯ ಶರಣಬಸಪ್ಪ ಎಸ್. ಪಾನಶಾಪ                   ಪಕ್ಷೇತರ           ೧೬೪೨

(ಅಂಚೆ ಮತಪತ್ರಗಳು : ಒಟ್ಟು- ೬೮೪, ಅಂಗೀಕೃತ- ೧೦೮, ತಿರಸ್ಕೃತ- ೫೭೬)




Tuesday, 30 April 2013

ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ



ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ನಗರಸಭೆಯ ಸದಸ್ಯರು ವಿವಿಧ ವಾರ್ಡಗಳಲ್ಲಿ ಮತಯಾಚನೆ ಮಾಡಿದರು. ೧೪,೧೫,೧೯ ಮತ್ತು ೨೦ನೇ ವಾರ್ಡಿನಲ್ಲಿ ಮತಯಾಚನೆ ಮಾಡಿದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ ಅಭಿವೃದ್ದಿಗಾಗಿ ಅನ್ಸಾರಿಯವರಿಗೆ ಮತ ನೀಡಿ ಆಯ್ಕೆ ಮಾಡಿ, ಆಮೀಷಗಳಿಗೆ ಒಳಗಾಗದೆ  ಜಿಡ್ಡುಗಟ್ಟಿದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ಇಕ್ಬಾಲ್ ಅನ್ಸಾರಿಯವರನ್ನು ಬಹುಮತದಿಂದ ಆಯ್ಕೆ ಮಾಡಿ ಎಂದು ವಿನಂತಿಸಿಕೊಂಡರು.
ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮಾತನಾಡಿ ಗಂಗಾವತಿ ನಗರದಂತೆಯೇ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರ ಬಗ್ಗೆ ಮತದಾರರಿಗೆ ವಿವರಿಸಿದರು. ಅವುಗಳ ಜಾರಿಗಾಗಿ ತಮ್ಮನ್ನು ಆಯ್ಕೆ ಮಾಡಲು ವಿನಂತಿಸಿಕೊಂಡರು. ಕಣದಲ್ಲಿರುವ ಉಳಿದ ಅಭ್ಯರ್ಥಿಗಳು ನನ್ನ ವಿರುದ್ದ ಟೀಕೆ ಮಾಡಲು ಯಾವುದೇ ವಿಷಯಗಳು ಇಲ್ಲದಿರುವುದರಿಂದ ಜಾತೀಯತೆಯ ವಿಷಬೀಜ ಬಿತ್ತಲು ಹೊರಟಿದ್ದಾರೆ. ಸಮಾಜದ ಕೋಮಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಅಂತವರನ್ನು ಧಿಕ್ಕರಿಸಿ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ವಿನಂತಿಸಿಕೊಂಡರು. ಮತದಾನ ಎಲ್ಲರ ಹಕ್ಕು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. 
ಇದೇ ಸಂದರ್ಭದಲ್ಲಿ ನಿವೃತ್ತ ಉಪತಹಶೀಲ್ದಾರರಾದ ವೀರಭದ್ರಪ್ಪ ಪತ್ತಾರ ಹಾಗೂ ಇತರರು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷ  ಎಸ್.ಬಿ.ಖಾದ್ರಿ, ತಾಲೂಕ ಅಧ್ಯಕ್ಷ ಯಮನಪ್ಪ ವಿಠಲಾಪೂರ, ನಗರಸಭೆ ಸದಸ್ಯರಾದ ಶ್ರೀಮತಿ ಸಂತೋಷಜಿ ,ಶಾಮೀದ ಮನಿಯಾರ್, ಶೇಕ ನಬಿ ಮುಖಂಡರಾದ ವೀರಣ್ಣ ಡಗ್ಗಿ,ಆರತಿ ತಿಪ್ಪಣ್ಣ ಹಾಗೂ ವಾರ್ಡಿನ ಹಿರಿಯರು,ಕಾರ್‍ಯಕರ್ತರು,ಅಭಿಮಾನಿಗಳು ಉಪಸ್ಥಿತರಿದ್ದರು. 

Sunday, 28 April 2013

ಅಭಿವೃದ್ದಿಗಾಗಿ ಅನ್ಸಾರಿಗೆ ಮತ ನೀಡಿ- ಲಲಿತಾರಾಣಿ ಶ್ರೀರಂಗದೇವರಾಯಲು



ಗಂಗಾವತಿ :  ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಗಂಗಾವತಿ ಇನ್ನೂ ಅಭಿವೃದ್ದಿ ಕಂಡಿಲ್ಲ. ಅಭಿವೃದ್ದಿಯ ತುಡಿತ ಇರುವ ಮತ್ತು ಕೆಲಸ ಮಾಡಿ ತೋರಿಸಿರುವ ಇಕ್ಬಾಲ್ ಅನ್ಸಾರಿಯವರಿಗೆ ಆಯ್ಕೆ ಮಾಡಿದರೆ ಗಂಗಾವತಿ ತಾಲೂಕಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಜೆಡಿಎಸ್ ನ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು. 
ಅವರು ಜೆಡಿಎಸ್ ಪಕ್ಷ ಗಂಗಾವತಿಯ ವಿವಿಧ ವಾರ್ಡಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್‍ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ೨೦೦೪ರಲ್ಲಿ ಆಯ್ಕೆಯಾಗಿ ಗಂಗಾವತಿಯ ನಗರದ ಸಮಗ್ರ ಅಭಿವೃದ್ದಿಗಾಗಿ ದುಡಿದ ಮತ್ತು ಹತ್ತಾರು ಯೋಜನೆಗಳನ್ನು ನಗರಕ್ಕೆ ತಂದು ಅಭಿವೃದ್ದಿಗಾಗಿ ಶ್ರಮಿಸಿದ ಇಕ್ಬಾಲ್ ಅನ್ಸಾರಿಯವರು ಈ ಸಲ ಆಯ್ಕೆಯಾದರೆ ಇನ್ನೂ ಹೆಚ್ಚಿನ ಕೆಲಸ ಮಾಡಬಲ್ಲರು. ಅವರನ್ನು ಆಯ್ಕೆ ಮಾಡುವ ಮೂಲಕ ಗಂಗಾವತಿಯ ಅಭಿವೃದ್ದಿಗೆ ಕೈಜೋಡಿಸೋಣ ಎಂದು ಮತದಾರರಿಗೆ ಕರೆನೀಡಿದರು.  ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು,ಓಣಿಯ ಮುಖಂಡರು ಉಪಸ್ಥಿತರಿದ್ದರು. 

Tuesday, 9 April 2013

ಗಂಗಾವತಿ ಕ್ಷೇತ್ರದ ವಿವಿದೆಡೆ ಪಾದಯಾತ್ರೆಯ ಮೂಲಕ ಅನ್ಸಾರಿ ಪ್ರಚಾರ

ಕೊಪ್ಪಳ :  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಪಾದಯಾತ್ರೆಯ ಮೂಲಕ ಪ್ರಚಾರದಲ್ಲಿ ತೊಡಗಿರುವ ಇಕ್ಬಾಲ್ ಅನ್ಸಾರಿಯವರು ದಾಸನಾಳ,ಹಿರೇಬೆಣಕಲ್ , ಚಿಕ್ಕಬೆಣಕಲ್, ಲಿಂಗದಳ್ಳಿ ಹಾಗೂ ಮುಕ್ಕುಂಪಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್‍ಯಕೈಗೊಂಡರು. ಕ್ಷೇತ್ರದ ಅಭಿವೃದ್ದಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡಲು ಕೋರಿದರು.  ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಹಲವಾರು ಮುಖಂಡರು, ಬೇರೆ ಪಕ್ಷಗಳ ಕಾರ್‍ಯಕರ್ತರು ಜೆಡಿಎಸ್ ಪಕ್ಷ ಸೇರಿದರು.
    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ರಮೇಶ, ಮುಖಂಡರಾದ ರಾಮಕೃಷ್ಣ,ಮುರ್ತುಜಾ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು,ಕಾರ್‍ಯಕರ್ತರು ಭಾಗವಹಿಸಿದ್ದರು.