ಗಂಗಾವತಿ : ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಗಂಗಾವತಿ ಇನ್ನೂ ಅಭಿವೃದ್ದಿ ಕಂಡಿಲ್ಲ. ಅಭಿವೃದ್ದಿಯ ತುಡಿತ ಇರುವ ಮತ್ತು ಕೆಲಸ ಮಾಡಿ ತೋರಿಸಿರುವ ಇಕ್ಬಾಲ್ ಅನ್ಸಾರಿಯವರಿಗೆ ಆಯ್ಕೆ ಮಾಡಿದರೆ ಗಂಗಾವತಿ ತಾಲೂಕಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಜೆಡಿಎಸ್ ನ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.
ಅವರು ಜೆಡಿಎಸ್ ಪಕ್ಷ ಗಂಗಾವತಿಯ ವಿವಿಧ ವಾರ್ಡಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್‍ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ೨೦೦೪ರಲ್ಲಿ ಆಯ್ಕೆಯಾಗಿ ಗಂಗಾವತಿಯ ನಗರದ ಸಮಗ್ರ ಅಭಿವೃದ್ದಿಗಾಗಿ ದುಡಿದ ಮತ್ತು ಹತ್ತಾರು ಯೋಜನೆಗಳನ್ನು ನಗರಕ್ಕೆ ತಂದು ಅಭಿವೃದ್ದಿಗಾಗಿ ಶ್ರಮಿಸಿದ ಇಕ್ಬಾಲ್ ಅನ್ಸಾರಿಯವರು ಈ ಸಲ ಆಯ್ಕೆಯಾದರೆ ಇನ್ನೂ ಹೆಚ್ಚಿನ ಕೆಲಸ ಮಾಡಬಲ್ಲರು. ಅವರನ್ನು ಆಯ್ಕೆ ಮಾಡುವ ಮೂಲಕ ಗಂಗಾವತಿಯ ಅಭಿವೃದ್ದಿಗೆ ಕೈಜೋಡಿಸೋಣ ಎಂದು ಮತದಾರರಿಗೆ ಕರೆನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು,ಓಣಿಯ ಮುಖಂಡರು ಉಪಸ್ಥಿತರಿದ್ದರು.
No comments:
Post a Comment