ಇದೇ ಸಂದರ್ಭದಲ್ಲಿ ನಿವೃತ್ತ ಉಪತಹಶೀಲ್ದಾರರಾದ ವೀರಭದ್ರಪ್ಪ ಪತ್ತಾರ ಹಾಗೂ ಇತರರು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕ ಅಧ್ಯಕ್ಷ ಯಮನಪ್ಪ ವಿಠಲಾಪೂರ, ನಗರಸಭೆ ಸದಸ್ಯರಾದ ಶ್ರೀಮತಿ ಸಂತೋಷಜಿ ,ಶಾಮೀದ ಮನಿಯಾರ್, ಶೇಕ ನಬಿ ಮುಖಂಡರಾದ ವೀರಣ್ಣ ಡಗ್ಗಿ,ಆರತಿ ತಿಪ್ಪಣ್ಣ ಹಾಗೂ ವಾರ್ಡಿನ ಹಿರಿಯರು,ಕಾರ್‍ಯಕರ್ತರು,ಅಭಿಮಾನಿಗಳು ಉಪಸ್ಥಿತರಿದ್ದರು.
Tuesday, 30 April 2013
ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ
Monday, 29 April 2013
Sunday, 28 April 2013
ಅಭಿವೃದ್ದಿಗಾಗಿ ಅನ್ಸಾರಿಗೆ ಮತ ನೀಡಿ- ಲಲಿತಾರಾಣಿ ಶ್ರೀರಂಗದೇವರಾಯಲು
ಗಂಗಾವತಿ : ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಗಂಗಾವತಿ ಇನ್ನೂ ಅಭಿವೃದ್ದಿ ಕಂಡಿಲ್ಲ. ಅಭಿವೃದ್ದಿಯ ತುಡಿತ ಇರುವ ಮತ್ತು ಕೆಲಸ ಮಾಡಿ ತೋರಿಸಿರುವ ಇಕ್ಬಾಲ್ ಅನ್ಸಾರಿಯವರಿಗೆ ಆಯ್ಕೆ ಮಾಡಿದರೆ ಗಂಗಾವತಿ ತಾಲೂಕಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಜೆಡಿಎಸ್ ನ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.
ಅವರು ಜೆಡಿಎಸ್ ಪಕ್ಷ ಗಂಗಾವತಿಯ ವಿವಿಧ ವಾರ್ಡಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್‍ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ೨೦೦೪ರಲ್ಲಿ ಆಯ್ಕೆಯಾಗಿ ಗಂಗಾವತಿಯ ನಗರದ ಸಮಗ್ರ ಅಭಿವೃದ್ದಿಗಾಗಿ ದುಡಿದ ಮತ್ತು ಹತ್ತಾರು ಯೋಜನೆಗಳನ್ನು ನಗರಕ್ಕೆ ತಂದು ಅಭಿವೃದ್ದಿಗಾಗಿ ಶ್ರಮಿಸಿದ ಇಕ್ಬಾಲ್ ಅನ್ಸಾರಿಯವರು ಈ ಸಲ ಆಯ್ಕೆಯಾದರೆ ಇನ್ನೂ ಹೆಚ್ಚಿನ ಕೆಲಸ ಮಾಡಬಲ್ಲರು. ಅವರನ್ನು ಆಯ್ಕೆ ಮಾಡುವ ಮೂಲಕ ಗಂಗಾವತಿಯ ಅಭಿವೃದ್ದಿಗೆ ಕೈಜೋಡಿಸೋಣ ಎಂದು ಮತದಾರರಿಗೆ ಕರೆನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು,ಓಣಿಯ ಮುಖಂಡರು ಉಪಸ್ಥಿತರಿದ್ದರು.
Thursday, 18 April 2013
Tuesday, 9 April 2013
ಗಂಗಾವತಿ ಕ್ಷೇತ್ರದ ವಿವಿದೆಡೆ ಪಾದಯಾತ್ರೆಯ ಮೂಲಕ ಅನ್ಸಾರಿ ಪ್ರಚಾರ
ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಪಾದಯಾತ್ರೆಯ ಮೂಲಕ ಪ್ರಚಾರದಲ್ಲಿ ತೊಡಗಿರುವ ಇಕ್ಬಾಲ್ ಅನ್ಸಾರಿಯವರು ದಾಸನಾಳ,ಹಿರೇಬೆಣಕಲ್ , ಚಿಕ್ಕಬೆಣಕಲ್, ಲಿಂಗದಳ್ಳಿ ಹಾಗೂ ಮುಕ್ಕುಂಪಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್‍ಯಕೈಗೊಂಡರು. ಕ್ಷೇತ್ರದ ಅಭಿವೃದ್ದಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡಲು ಕೋರಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಹಲವಾರು ಮುಖಂಡರು, ಬೇರೆ ಪಕ್ಷಗಳ ಕಾರ್‍ಯಕರ್ತರು ಜೆಡಿಎಸ್ ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ರಮೇಶ, ಮುಖಂಡರಾದ ರಾಮಕೃಷ್ಣ,ಮುರ್ತುಜಾ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು,ಕಾರ್‍ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ರಮೇಶ, ಮುಖಂಡರಾದ ರಾಮಕೃಷ್ಣ,ಮುರ್ತುಜಾ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು,ಕಾರ್‍ಯಕರ್ತರು ಭಾಗವಹಿಸಿದ್ದರು.
ಇಕ್ಬಾಲ್ ಅನ್ಸಾರಿಯವರಿಂದ ಮತಯಾಚನೆ
ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ೭-೪-೨೦೧೩ರಂದು
ಕಾಮನೂರ,ಭೀಮನೂರ,ಸಂಗಾಪೂರ,ಲೇಬಗೇರಿ,ಯಲಮಗೇರಾ, ತಾಳಕನಕಾಪೂರ,ಬುಡಶೆಟ್ನಾಳ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಜೆಡಿಎಸ್ ಪರ ಪ್ರಚಾರ ಮಾಡಿದರು.
ಪಾದಯಾತ್ರೆಯ ಸಂದರ್ಭದಲ್ಲಿ ಹಾಲಿ ಗ್ರಾಮ ಪಂಚಾಯತ್ ಸದಸ್ಯರು,ಗ್ರಾಮದ ಹಲವಾರು ಜನಾಂಗದ ಮುಖಂಡರುಗಳು ಜೆಡಿಎಸ್ ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ,ನಗರ ಘಟಕ ಯಮನಪ್ಪ ವಿಠಲಾಪೂರ ತಾಲೂಕ ಜೆಡಿಎಸ್ ಅಧ್ಯಕ್ಷರು,
ಗ್ರಾಮೀಣ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಗುಮಗೇರಿ,ತಾಲೂಕ ಕಾರ್‍ಯಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿಪ್ಪಣ್ಣ, ಗಾಳೆಪ್ಪ ಗಂಟಿ ,ಬಸವರಾಜ
ಚಿಲವಾಡಗಿ,ವಿರೇಶ ತಾವರಗೇರಿ,ಬಸವಕುಮಾರ ಪಟ್ಟಣಶೆಟ್ಟಿ , ಫಕೀರಗೌಡ ಲೇಬಗೇರಿ ಸೇರಿದಂತೆ ಹಲವಾರು ನಾಯಕರು, ಗ್ರಾಮಗಳ ಮುಖಂಡರು,ಗ್ರಾಮ ಪಂಚಾಯತ್ ಸದಸ್ಯರು,ಹಿರಿಯರು,ಪಕ್ಷದ ಕಾರ್‍ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
Wednesday, 3 April 2013
Monday, 1 April 2013
Subscribe to:
Posts (Atom)